ವ್ಯಾಪಾರ ಸಾಲಗಳು
ವ್ಯಾಪಾರ ಸಾಲ ಎಂದರೆ ನಿರ್ದಿಷ್ಟ ಉದ್ದೇಶಕ್ಕಾಗಿ — ಹೊಸ ಮಳಿಗೆ ತೆರೆಯುವುದು, ನವೀಕರಣ, ಸಗಟಾಗಿ ಸರಕು ಖರೀದಿ, ಅಥವಾ ಬೆಳವಣಿಗೆಗೆ ಹಣ — ನಿಗದಿತ ಅವಧಿಯಲ್ಲಿ EMI ಮೂಲಕ ಮರುಪಾವತಿಸುವ ಟರ್ಮ್ ಲೋನ್. ಭದ್ರತೆ ಇಲ್ಲದ ವ್ಯಾಪಾರ ಸಾಲ ಬೇಗ ಸಿಗುತ್ತದೆ ಆದರೆ ದುಬಾರಿ; ಭದ್ರತೆ ಇರುವ ಸಾಲಕ್ಕೆ ಅಡಮಾನ ಬೇಕು, ಸಮಯ ಹೆಚ್ಚು. ಸಾಲದಾತರು ಮೊದಲು ವ್ಯಾಪಾರವನ್ನು, ನಂತರ ಮಾಲೀಕರನ್ನು ಪರಿಶೀಲಿಸುತ್ತಾರೆ.
ಸಾಲದಾತರು ಸಾಮಾನ್ಯವಾಗಿ ಏನು ಕೇಳುತ್ತಾರೆ ಎಂದು ವಿವರಿಸಿ, ನಿಮ್ಮ ಕಾಗದಪತ್ರಗಳನ್ನು ಕ್ರಮವಾಗಿ ಜೋಡಿಸಲು ಸಹಾಯ ಮಾಡುತ್ತೇವೆ — ಮೊದಲ ಕರೆ ಉಚಿತ.
ನಿಮ್ಮ EMI ಅಂದಾಜಿಸಿ
EMI ಕ್ಯಾಲ್ಕುಲೇಟರ್ (ಅಂದಾಜು ಮಾತ್ರ)
ಮೊತ್ತ, ವಾರ್ಷಿಕ ಬಡ್ಡಿ ದರ ಮತ್ತು ತಿಂಗಳುಗಳ ಸಂಖ್ಯೆ ನಮೂದಿಸಿ. ಹೆಚ್ಚಿನ ಬ್ಯಾಂಕುಗಳು ಟರ್ಮ್ ಲೋನ್ಗೆ ಬಳಸುವ ಇಳಿಯುವ ಬಾಕಿ (reducing balance) ವಿಧಾನದಲ್ಲಿ ಅಂದಾಜು.
ಅಂದಾಜು ಮಾತ್ರ. ನಿಜವಾದ ದರ, EMI ಮತ್ತು ಶುಲ್ಕಗಳನ್ನು ನಿಮ್ಮ ಸಾಲದಾತರೇ ನಿಗದಿಪಡಿಸುತ್ತಾರೆ.
ವ್ಯಾಪಾರ ಸಾಲದ ಬಗ್ಗೆ ಕರೆ ಬೇಕೇ? ನಿಮ್ಮ ವಿವರಗಳನ್ನು ನೀಡಿ
ಉಚಿತ ಹತ್ತು ನಿಮಿಷದ ಕರೆ. ಈಗ ದಾಖಲೆಗಳು ಬೇಕಿಲ್ಲ.
ನಿಮ್ಮ ವಿವರಗಳು ಕಳುಹಿಸಲಾಗಿದೆ
ನಾವು ಸಾಲ ನೀಡುವುದಿಲ್ಲ, ಏರ್ಪಡಿಸುವುದಿಲ್ಲ; ಕಮಿಷನ್ ಪಡೆಯುವುದಿಲ್ಲ. ದಯವಿಟ್ಟು PAN, ಆಧಾರ್, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಯಾವುದೇ ದಾಖಲೆಯನ್ನು ಈ ಫಾರ್ಮ್ ಮೂಲಕ ಕಳುಹಿಸಬೇಡಿ. ನಮ್ಮ ಗೌಪ್ಯತಾ ಸೂಚನೆಯನ್ನು ಓದಿ.
ವಿವರಗಳು
ಸಾಲದಾತರು ಸಾಮಾನ್ಯವಾಗಿ ಪರಿಶೀಲಿಸುವುದು
- ವ್ಯಾಪಾರ ಎಷ್ಟು ಕಾಲದಿಂದ ನಡೆಯುತ್ತಿದೆ — ಅನೇಕ ಸಾಲದಾತರು ಎರಡು-ಮೂರು ವರ್ಷ ಬಯಸುತ್ತಾರೆ.
- ITR, ಹಣಕಾಸು ಹೇಳಿಕೆಗಳು ಮತ್ತು GST ರಿಟರ್ನ್ಗಳಿಂದ ವಹಿವಾಟು ಮತ್ತು ಲಾಭ.
- ಬ್ಯಾಂಕ್ ಸ್ಟೇಟ್ಮೆಂಟ್: ನಿಯಮಿತ ಜಮೆಗಳು; ಬೌನ್ಸ್ ಆದ ಚೆಕ್ ಅಥವಾ ಮಿತಿ ಮೀರಿದ ದಿನಗಳು ಇಲ್ಲದಿರುವುದು.
- ಈಗಿರುವ ಸಾಲಗಳು ಮತ್ತು ಅವುಗಳ ಪಾವತಿ ವಿಧಾನ; ಮಾಲೀಕರ ಮತ್ತು ವ್ಯವಹಾರದ ಕ್ರೆಡಿಟ್ ದಾಖಲೆಗಳು.
- ಉದ್ದೇಶ, ಮತ್ತು ಹೊಸ EMI-ಯನ್ನು ನಗದು ಹರಿವು ಭರಿಸಬಲ್ಲದೇ.
ಸಿದ್ಧವಾಗಿಡಬೇಕಾದ ದಾಖಲೆಗಳು
- ಮಾಲೀಕರ ಗುರುತು ಮತ್ತು ವಿಳಾಸ ಪುರಾವೆ; ವ್ಯವಹಾರದ ಮತ್ತು ಮಾಲೀಕರ PAN.
- ವ್ಯವಹಾರ ಪುರಾವೆ: ನೋಂದಣಿ, GST ಪ್ರಮಾಣಪತ್ರ, MSME ನೋಂದಣಿ ಪ್ರಮಾಣಪತ್ರ, ಅಂಗಡಿ ಪರವಾನಗಿ ಅಥವಾ ಪಾಲುದಾರಿಕೆ ಪತ್ರ / ಕಂಪನಿ ನೋಂದಣಿ ದಾಖಲೆಗಳು.
- ಕಳೆದ ಎರಡು-ಮೂರು ವರ್ಷಗಳ ITR ಮತ್ತು ಲೆಕ್ಕಾಚಾರ; ಅನ್ವಯಿಸುವಲ್ಲಿ ಲೆಕ್ಕಪರಿಶೋಧಿತ ಅಥವಾ CA ಪ್ರಮಾಣೀಕರಿಸಿದ ಹಣಕಾಸು ಹೇಳಿಕೆಗಳು.
- ಕಳೆದ ವರ್ಷದ GST ರಿಟರ್ನ್ಗಳು.
- ಕಳೆದ ಆರರಿಂದ ಹನ್ನೆರಡು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್.
- ಭದ್ರತೆ ಇರುವ ಸಾಲಗಳಿಗೆ: ಅಡಮಾನದ ದಾಖಲೆಗಳು.
ಮರುಪಾವತಿ
ಮಾಸಿಕ EMI, ಸಾಮಾನ್ಯವಾಗಿ ಒಂದರಿಂದ ಐದು ವರ್ಷ. ಕೆಲವು ಸಾಲದಾತರು ಆರಂಭದಲ್ಲಿ ಸಣ್ಣ ವಿರಾಮ ಅವಧಿ (moratorium) ನೀಡುತ್ತಾರೆ. ಬೌನ್ಸ್ ಆದ EMI-ಗಳು ಗ್ರಾಹಕ ಮತ್ತು ವಾಣಿಜ್ಯ ಬ್ಯೂರೋ ಎರಡಕ್ಕೂ ವರದಿಯಾಗುತ್ತವೆ.
ಬಡ್ಡಿ ಮತ್ತು ಶುಲ್ಕಗಳು
ಭದ್ರತೆ ಇಲ್ಲದ ವ್ಯಾಪಾರ ಸಾಲಗಳಿಗೆ ಭದ್ರತೆ ಇರುವವುಗಳಿಗಿಂತ ಹೆಚ್ಚು ಬಡ್ಡಿ. ಪ್ರಕ್ರಿಯಾ ಶುಲ್ಕ, ಮುಂಪಾವತಿ ಶುಲ್ಕ, ದರ ನಿಶ್ಚಿತವೇ ಬದಲಾಗುವುದೇ ಎಂದು ಕೇಳಿ.
ಭದ್ರತೆ ಅಥವಾ ಸ್ವಂತ ಪಾಲು
ಸಾಲದಾತ ನಿಗದಿಪಡಿಸಿದ ಮೊತ್ತದವರೆಗೆ ಭದ್ರತೆ ಇಲ್ಲದೆ; ಅದಕ್ಕಿಂತ ಹೆಚ್ಚಿಗೆ ಅಡಮಾನ (ಆಸ್ತಿ, ಠೇವಣಿ, ಯಂತ್ರೋಪಕರಣ) ಅಥವಾ ಜಾಮೀನುದಾರ. ಕೆಲವು ಸರ್ಕಾರಿ ಬೆಂಬಲಿತ ಖಾತರಿ ಯೋಜನೆಗಳು ಅರ್ಹ MSME-ಗಳಿಗೆ ಅಡಮಾನವಿಲ್ಲದ ಸಾಲಗಳನ್ನು ಭರಿಸುತ್ತವೆ; ಯಾವುದು ಅನ್ವಯಿಸುತ್ತದೆ ಎಂದು ಬ್ಯಾಂಕ್ ಅನ್ನು ಕೇಳಿ.
ಹೇಗೆ ಸಿದ್ಧರಾಗುವುದು
ರಿಟರ್ನ್ಗಳನ್ನು ಸಮಯಕ್ಕೆ ಸಲ್ಲಿಸಿ. ವ್ಯವಹಾರದ ಆದಾಯವನ್ನು ವ್ಯವಹಾರದ ಬ್ಯಾಂಕ್ ಖಾತೆಯ ಮೂಲಕವೇ ನಡೆಸಿ. ವ್ಯವಹಾರದ ಒಂದು ಪುಟದ ಪ್ರೊಫೈಲ್ ಮತ್ತು EMI ಹೇಗೆ ಪಾವತಿಯಾಗುತ್ತದೆ ಎಂದು ತೋರಿಸುವ ಸರಳ ನಗದು ಹರಿವಿನ ಹಾಳೆ ಸಿದ್ಧಪಡಿಸಿ. GST ಮತ್ತು ಬ್ಯಾಂಕ್ ದಾಖಲೆಗಳು ಪರಸ್ಪರ ಹೊಂದುವಂತೆ ಇಡಿ.
ವ್ಯಾಪಾರ ಸಾಲಗಳ ಕುರಿತ ಪ್ರಶ್ನೆಗಳು
ಹೊಸ ವ್ಯಾಪಾರಕ್ಕೆ ಸಾಲ ಸಿಗುತ್ತದೆಯೇ?
ಕಷ್ಟ. ಹೆಚ್ಚಿನ ಸಾಲದಾತರು ವ್ಯವಹಾರದ ಇತಿಹಾಸ ಬಯಸುತ್ತಾರೆ. ಹೊಸ ಉದ್ಯಮಗಳಿಗೆ ಸರ್ಕಾರಿ ಯೋಜನೆಗಳಿವೆ; ನಿಮ್ಮ ಬ್ಯಾಂಕ್ ಅನ್ನು ಕೇಳಿ.
ನನಗೆ ಅಡಮಾನ ಬೇಕೇ?
ವ್ಯವಹಾರದ ನಗದು ಹರಿವು ಮತ್ತು ದಾಖಲೆಗಳು ಬಲವಾಗಿದ್ದರೆ ಸಣ್ಣ ಭದ್ರತೆರಹಿತ ಸಾಲಗಳಿಗೆ ಬೇಕಿಲ್ಲ. ದೊಡ್ಡ ಸಾಲಗಳಿಗೆ ಸಾಮಾನ್ಯವಾಗಿ ಭದ್ರತೆ ಅಥವಾ ಖಾತರಿ ಯೋಜನೆಯ ರಕ್ಷಣೆ ಬೇಕು.
ವ್ಯಾಪಾರ ಸಾಲ ಮತ್ತು ಕಾರ್ಯನಿರತ ಬಂಡವಾಳ ಒಂದೇನಾ?
ಇಲ್ಲ. ವ್ಯಾಪಾರ ಸಾಲ ಎಂದರೆ EMI ಮೂಲಕ ಮರುಪಾವತಿಸುವ ನಿಗದಿತ ಮೊತ್ತ. ಕಾರ್ಯನಿರತ ಬಂಡವಾಳ ಎಂದರೆ ದೈನಂದಿನ ಅಗತ್ಯಗಳಿಗೆ ಮರುಬಳಕೆಯ ಮಿತಿ. ಕಾರ್ಯನಿರತ ಬಂಡವಾಳ ಮತ್ತು ಕ್ಯಾಶ್ ಕ್ರೆಡಿಟ್ / ಓವರ್ಡ್ರಾಫ್ಟ್ ನೋಡಿ.
ನನ್ನ ವೈಯಕ್ತಿಕ ಕ್ರೆಡಿಟ್ ಸ್ಕೋರ್ ಮುಖ್ಯವೇ?
ಹೌದು. ಏಕಮಾಲೀಕರು ಮತ್ತು ಪಾಲುದಾರರಿಗೆ ಅದನ್ನು ವ್ಯವಹಾರದ ದಾಖಲೆಯ ಜೊತೆಗೆ ಓದಲಾಗುತ್ತದೆ.
"ಬ್ಯಾಂಕಿಂಗ್" ಎಂದು ಸಾಲದಾತರು ಹೇಳುವುದರ ಅರ್ಥವೇನು?
ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ನ ಮಾದರಿ — ಸರಾಸರಿ ಬಾಕಿ, ಜಮೆಗಳ ಸಂಖ್ಯೆ ಮತ್ತು ಗಾತ್ರ, ಚೆಕ್ ರಿಟರ್ನ್ಗಳು. ಸಣ್ಣ ವ್ಯಾಪಾರ ಸಾಲಗಳಿಗೆ ಇದು ಅತ್ಯಂತ ಬಲವಾದ ಸೂಚಕಗಳಲ್ಲಿ ಒಂದು.
ಮುಂಪಾವತಿ ಮಾಡಬಹುದೇ?
ಸಾಮಾನ್ಯವಾಗಿ ಕನಿಷ್ಠ ಅವಧಿಯ ನಂತರ, ಹೆಚ್ಚಾಗಿ ಶುಲ್ಕದೊಂದಿಗೆ. ಸಹಿ ಮಾಡುವ ಮೊದಲು ಪರಿಶೀಲಿಸಿ.
ಏಕಮಾಲೀಕತ್ವ ಮತ್ತು ಕಂಪನಿಯನ್ನು ಹೇಗೆ ಬೇರೆ ಬೇರೆಯಾಗಿ ಪರಿಗಣಿಸಲಾಗುತ್ತದೆ?
ಏಕಮಾಲೀಕತ್ವದಲ್ಲಿ ಮಾಲೀಕ ಮತ್ತು ವ್ಯಾಪಾರ ಒಂದೇ ಸಾಲಗಾರ; ಪಾಲುದಾರಿಕೆ ಅಥವಾ ಕಂಪನಿಯಲ್ಲಿ ಸಂಸ್ಥೆ ಸಾಲ ಪಡೆಯುತ್ತದೆ, ಮಾಲೀಕರು ಸಾಮಾನ್ಯವಾಗಿ ವೈಯಕ್ತಿಕ ಖಾತರಿ ನೀಡುತ್ತಾರೆ.
ಇಲ್ಲಿ ನಾವು ಮಾಡುವುದು: ಸಾಲದಾತರು ಸಾಮಾನ್ಯವಾಗಿ ಏನು ಕೇಳುತ್ತಾರೆ ಎಂದು ವಿವರಿಸಿ, ನಿಮ್ಮ ದಾಖಲೆಗಳನ್ನು ಕ್ರಮವಾಗಿ ಜೋಡಿಸಲು ಸಹಾಯ ಮಾಡುತ್ತೇವೆ. ನಾವು ಸಾಲ ನೀಡುವುದಿಲ್ಲ, ಏರ್ಪಡಿಸುವುದಿಲ್ಲ, ಕಮಿಷನ್ ಪಡೆಯುವುದಿಲ್ಲ. ಮೊದಲ ಕರೆ ಉಚಿತ. ನಾವು ಏನು ಮಾಡುತ್ತೇವೆ ಎಂದು ನೋಡಿ.